ನನ್ನ ಕವನಗಳು

ನನ್ನ  ಕವನಗಳು

#ನನ್ನ ಕವನಗಳು ವ್ಯಾಟ್ಸಪ್ ಗ್ರೂಪ್ನಲ್ಲಿ ಪ್ರೇಮದ ವಿಷಯದಲ್ಲಿ ಏರ್ಪಡಿಸಿದ್ದ ಆಡು ಭಾಷೆಯ ಕವನ ಸ್ಫರ್ಧೆಯಲ್ಲಿ ಮೊದಲ ಸ್ಥಾನ ಪಡೆದ ಇವರ ಕವನ, ಅಭಿನಂದನೆಗಳು ಜಾನಯ್ಯಾ ಹಿರೇಮಠ ಅವ್ರಿಗೆ, ಮಲೆನಾಡ ಆಡು ಭಾಷೆ ಉಳಿಸುವ ನಿಟ್ಟಿನಲ್ಲಿ ನಡೆಸುವ ಕಾರ್ಯಕ್ರಮಗಳು, ನಿಮ್ಮೆಲ್ಲರ ಬೆಂಬಲ ಇರಲಿ….😍😍 ಶೀರ್ಷಿಕೆ: *ಮನದೊಡತಿ ಮಲೆನಾಡ ಕನ್ನಡತಿ* 😊 ನೀ ನಡ್ಕುಂಡ್ ಬರೋ ಗ್ಯದ್ದಿ ಅಂಚಲ್ಲಿ.. ಉದ್ದುದ್ದಕ್ಕು ನಿನ್ ಹೆಜ್ಜಿದೆ ರಂಗೋಲಿ.. ನೀ ನನ್ ನೋಡಾದ್ರು ನಗ್ತೀಯ ಅಂತ್ಹೇಳಿ.. ಕಾಯ್ತಾ ಕೂತ್ಕಂಡಿದ್ದೆ ಕಣೇ ನಾನಿಲ್ಲಿ.. ಎದಿಯೊಳಗೆ ತೊಳಿ ಮೀನ್ ಮನಿಯ ಮಾಡ್ಯದೆ.. ಅಂತ ನೀ ಎದ್ರಿಗ್ ಬಂದಾಂಗೆಲ್ಲ ನನ್ ಮನ್ಸು ಹೇಳ್ತದೆ.. ನೀ ವಾರಿಕಣ್ಣಲ್ ನೋಡ್ದಾಗೆಲ್ಲ ಎಂತದೋ ನಾಚಿಗಿ.. ನೀನ್ ಕಾಣ್ದೆ ಇರೋ ದಿನಾ ನನ್ ಯದಿಗ್ ಬ್ಯಾಸಿಗಿ.. ಹಗ್ಲು ರಾತ್ರಿಯೆಲ್ಲಾ ನಿಂದೆ ಗ್ಯಾನ ಕೇಳೇ ಓ ಹುಡಿಗಿ.. ನಿನ್ ಹಿಂದೆ ಹಿಂಗೆ ಬಂದು ಯಾವತ್ ಬೀಳ್ತದೋ ಬಡ್ಗಿ.. ಎದಿಯೊಳಗೆ ತೊಳಿ ಮೀನ್ ಮನಿಯ ಮಾಡ್ಯದೆ.. ಅಂತ ನೀ ಎದ್ರಿಗ್ ಬಂದಾಂಗೆಲ್ಲ ನನ್ ಮನ್ಸು ಹೇಳ್ತದೆ.. ಹುಣ್ಮೆ ದಿಸ ಆಕಾಶ್ದಾಗೆ ಆ ಹೊಳಿಯೋ ಚಂದಿರ.. ನೋಡೀ ನಾಚ್ಕುಂತಾನೆ ನಿನ್ ಹಣಿ ಮ್ಯಾಲಿನ ಸಿಂಧೂರ.. ಸಬ್ದ ಮಾಡ್ತ ಅದೇ ನಿನ್ನ ಕೈ ಬಳಿಯ ವಯ್ಯಾರ.. ಅದ್ನ ಕೇಣ್ತಾ ಕೇಣ್ತಾ ಆದೇ ನಿನ್ ಪ್ರೀತಿಗೆ ಸವ್ಕಾರ.. ಎದಿಯೊಳಗೆ ತೊಳಿ ಮೀನ್ ಮನಿಯ ಮಾಡ್ಯದೆ.. ಅಂತ ನೀ ಎದ್ರಿಗ್ ಬಂದಾಂಗೆಲ್ಲ ನನ್ ಮನ್ಸು ಹೇಳ್ತದೆ.. ಆ ಚೂಡಿದಾರದಲ್ಲಿ ಚಂದ ಕಾಣ್ತೀ ಕಣೇ ನೀನು ಯಾವಾಗ್ಲೂ.. ನೀ ಸೀರಿಯುಟ್ಕುಂಡ್ ಬಂದ್ರೆ ಮಾತ್ರ ಗರಿ ಬಿಚ್ಕಂಡ್ ಕುಣಿಯೋ ನವಿಲು.. ನಿನ್ ಬಗ್ಗೆ ಯೋಚ್ನಿ ಮಾಡ್ತ ಕೂತ್ಕಂಡಿದ್ರೆ ನಂಗೆ ಏರ್ತದೆ ಅಮಲು.. ಬರೆಯೋಕೋದಾಗೆಲ್ಲಾ ಸಾಲಾದಿಲ್ಲ ಕಣೇ ಈ ಕನ್ನಡ ಪದ್ಗಳು.. ಎದಿಯೊಳಗೆ ತೊಳಿ ಮೀನ್ ಮನಿಯ ಮಾಡ್ಯದೆ.. ಅಂತ ನೀ ಎದ್ರಿಗ್ ಬಂದಾಂಗೆಲ್ಲ ನನ್ ಮನ್ಸು ಹೇಳ್ತದೆ.. ​ – ಜಾನಯ್ಯಾ ಹಿರೇಮಠ 1) ಬದುಕಿನ ಒಂದು ವಿಚಿತ್ರ ನಿಯಮ.. ಪ್ರೀತಿಸುವುದೆಲ್ಲಾ ಸಿಗುವುದಾದರೆ ಕಣ್ ನೀರಿಗೆ ಬೆಲೆ ಎಲ್ಲಿದೆ.. ಸಿಗುವುದೆಲ್ಲಾವನ್ನು ಪ್ರೀತಿಸುವುದಾದರೆ ಕಣ್ಣೀರಿಗೆ ಅವಕಾಶ ಎಲ್ಲಿದೆ… 2)ನನ್ನ ಎದೆಯಲಿ ನಿನಗಾಗಿ ಸ್ಥಾನ ನೀಡಲು ನಾ ಸಿದ್ದನಾಗಿರುವೆ ಆದರೆ ನೀನು ನನ್ನಲ್ಲಿ ಬಾರದೆ ಸುಮ್ಮನೆ ಮನದಲ್ಲಿ ಕಾಡುತ್ತಿರಿವೆ.. ನಿನ್ನ ಎದೆಯಲ್ಲಿ ಸ್ಥಾನ ಗಿಟಿಸಿಕೊಳ್ಳಲು ನಾ ಪರದಾಡುತ್ತಿರಿವೆ ಆದರೆ ಇದಕೆ ನಾನು ನಿನ್ನ ಅನುಮತಿಗಾಗಿ ಕಾದು ನಿಂತಿರುವೆ.. ಪಿಸುಗುಡುತಿದೆ ನನ್ನ ಹೃದಯವು ನಿನ್ನ ಅನುಮತಿ ಇದೆ ಎಂದು ನಿನ್ನ ಮೌನವ ನಾ ಅರಿಯೆನು ಅದರಲ್ಲಿ ನಿನ್ನ ಸಮ್ಮತಿ ಇದೆ ಎಂದು .. ದಯಮಾಡಿ ತಿಳಿ ಹೇಳೆಯಾ ನನಗೆ ಅರ್ಥವಾಗುವ ಹಾಗೆ ಇಂದು.. ಚಿರರುಣಿ ಆಗಿರುವೆ ನಾ ನಿನಗೆ ಇಂದು ಎಂದೆಂದೂ.. 3)ಒಂದು ಚಿಟ್ಟೆ ‘ ಬಿಳಿ ಗುಲಾಬಿಗೆ ಹೇಳಿತು ‘ I Luv u ಅಂತ ‘ ಅದ್ಕೆ ಗುಲಾಬಿ ಹೇಳಿತು ನಾನು ಯಾವತ್ತು ಬಿಳಿ ಬಣ್ಣದಿಂಧ ಕೆಂಪು ಬಣ್ಣ ಆಗ್ತಿನೋ ‘ ಅವತ್ತು ನಾನು ನಿನ್ನ Luv ಮಾಡ್ತೀನಿ ಅಂತ ” ಹೇಳಿತು . Nxt. ಆಗ ಚಿಟ್ಟೆ ತನ್ನ ಮೈಯನ್ನು ಗುಲಾಬಿ ಗಿಡಧ ಮುಳ್ಳಿಗೆ ಚುಚ್ಚಿ ಕೊಲ್ಲುತ , ತನ್ನ ರಕ್ತ ದಿಂದ ಆ ಹೂವನ್ನು ಕೆಂಪು ಬಣ್ಣ ಮಾಡಿದ್ತು ಆಗ ಗುಲಾಬಿ ಹೂವಿನ ಮನಸು ಕರಗಿ I Luv u’ ಅಂತ ಹೇಳಿದಾಗ ಚಿಟ್ಟೆ ಆಗ್ಲೇ ಸತ್ತು ಹೋಗಿತ್ತು ” so” ಪ್ರೀತಿ ಸೋರನ್ನ ಕಾಯಿಸಬೇಕು ನಿಜ ” ಆದ್ರೆ ಸಾಯಿಸಬಾರ್ದು 💞💕 🌹🌹 💕💞 4) ಪ್ರಶ್ನೆ- ಜೀವನದಲ್ಲಿ ಏನನ್ನು ಅನುಸರಿಸಬೇಕು ? ಉತ್ತರ – ಜೀವನದಲ್ಲಿ ಗುರು-ಹಿರಿಯರ ಮಾತನ್ನು ಅನುಸರಿಸಬೇಕು. ಪ್ರಶ್ನೆ – ಪ್ರಪಂಚದಲ್ಲಿ ಹಿತಕರವಾದದ್ದು ಯಾವುದು ? ಉತ್ತರ – ಪ್ರಪಂಚದಲ್ಲಿ ಧರ್ಮವೇ ಹಿತಕರವಾದದ್ದು. ಪ್ರಶ್ನೆ – ಯಾವುದು ವಿಷ ? ಉತ್ತರ – ಗುರು ಹಿರಿಯರಿಗೆ ಅವಮಾನ ಮಾಡುವುದು, ಅಗೌರವ ತೋರುವುದೇ ವಿಷ. ಪ್ರಶ್ನೆ – ಮನುಷ್ಯರಲ್ಲಿ ಇರಲೇಬೇಕಾದ ಶ್ರೇಷ್ಠ ಗುಣ ಯಾವುದು ? ಉತ್ತರ – ಯಾವಾಗಲೂ ತನ್ನ ಮತ್ತು ಇತರರ ಸುಖಕ್ಕಾಗಿ ಜೀವನವನ್ನು ತೊಡಗಿಸಿಕೊಳ್ಳುವುದು. ಪ್ರಶ್ನೆ – ಕಳ್ಳರು ಯಾರು ? ಉತ್ತರ – ವಿಷಯ ವಸ್ತುಗಳೇ ಕಳ್ಳರು (ಅವು ಇಂದ್ರಿಯಗಳ ಮೂಲಕ ಮನಸನ್ನು ಅಪಹರಿಸುತ್ತವೆ ) ಪ್ರಶ್ನೆ – ನಮ್ಮ ಶತ್ರು ಯಾರು ? ಉತ್ತರ – ನಿರುದ್ಯೋಗವೇ ನಮ್ಮ ಶತ್ರು. ಪ್ರಶ್ನೆ – ಶ್ರೇಷ್ಠತೆಯ ಮೂಲ ಯಾವುದು ? ಉತ್ತರ – ನಾಮ ಇತರರಲ್ಲಿ ಏನನ್ನೂ ಅಂಗಲಾಚದಿರುವುದೇ ಜೀವನದ ಶ್ರೇಷ್ಠತೆ ಪ್ರಶ್ನೆ – ದುಃಖವೆಂದರೇನು..? ಉತ್ತರ – ಸಂತೋಷವನ್ನು ಕಳೆದುಕೊಂಡಾಗ ಉಂಟಾಗುವ ಅವಸ್ಥೆ. ಪ್ರಶ್ನೆ – ಆಲಸ್ಯತನವು ಯಾವುದು ? ಉತ್ತರ – ವಿದ್ಯಾವಂತನಾಗಿಬಿಟ್ಟೆನೆಂದು ತಿಳಿದು, ಅಧ್ಯಯನ ಮಾಡದಿರುವುದು. ಪ್ರಶ್ನೆ – ಕಮಲದ ಎಲೆಯ ಮೇಲಿನ ನೀರಿನಂತೆ ಚಂಚಲವಾದದ್ದು ಯಾವುದು ? ಉತ್ತರ – ತಾರುಣ್ಯ, ಸಂಪತ್ತು ಮತ್ತು ಆಯುಷ್ಯ ಇವು ಕಮಲದ ಎಲೆ ಮೇಲಿನ ನೀರಿನಂತೆ ಚಂಚಲವಾದವುಗಳು. ಪ್ರಶ್ನೆ – ಬೆಲೆ ಕಟ್ಟಲಾಗದ್ದು ಯಾವುದು ? ಉತ್ತರ – ಸರಿಯಾದ ಸಮಯದಲ್ಲಿ ಸತ್ಪಾತ್ರರಿಗೆ ದಾನ ಮಾಡಿದ್ದು. ಪ್ರಶ್ನೆ – ಸಾಯುವವರೆಗೂ ಬಾಣದಂತೆ ಚುಚ್ಚುತ್ತಲೇ ಇರುವುದು ಯಾವುದು ? ಉತ್ತರ – ಬಚ್ಚಿಟ್ಟುಕೊಂಡ ಪಾಪಕಾರ್ಯ ಸಾಯುವವರೆಗೂ ಬಾಣದಂತೆ ಚುಚ್ಚತ್ತಲೇ ಇರುತ್ತದೆ . ಪ್ರಶ್ನೆ – ಯಾವ ವಿಷಯದಲ್ಲಿ ಪ್ರಯತ್ನವನ್ನು ಮಾಡಬೇಕು ? ಉತ್ತರ – ವಿಧ್ಯಾಭ್ಯಾಸದಲ್ಲಿ ,ಒಳ್ಳೆಯ ಔಷಧೋಪಚಾರದಲ್ಲಿ ಮತ್ತು ದಾನ ಮಾಡುವಲ್ಲಿ ಪ್ರಯತ್ನ ಮಾಡಬೇಕು.. ಪ್ರಶ್ನೆ – ಈ ಜಗತ್ತನ್ನು ಯಾರು ಗೆಲ್ಲುತ್ತಾರೆ ? ಉತ್ತರ – ಸತ್ಯ ಮತ್ತು ಸಹನೆಗಳಿಂದ ಕೂಡಿದ ಮನುಷ್ಯನು ಈ ಜಗತ್ತನ್ನು ಗೆಲ್ಲುತ್ತಾನೆ. ಪ್ರಶ್ನೆ – ಪ್ರಾಣಿ ಸಮೂಹವು ಯಾರ ಅಧೀನದಲ್ಲಿರುತ್ತದೆ ? ಉತ್ತರ – ಪ್ರಾಣಿ ಸಮೂಹವು ಸತ್ಯವದುದನ್ನು ಮತ್ತು ಪ್ರಿಯವಾದುದನ್ನು ಮಾತನಾಡುವ ವಿನಯಶಾಲಿಯ ವಶದಲ್ಲಿ ಇರುತ್ತದೆ. ಪ್ರಶ್ನೆ – ಎಲ್ಲಿ ಸ್ಥಿರವಾಗಿ ನಿಲ್ಲಬೇಕು ? ಉತ್ತರ – ದೃಷ್ಟ ಮತ್ತು ಅದೃಷ್ಟ (ಕಂಡು ಕಾಣದ )ಲಾಭದಿಂದ ಸಮೃದ್ಧವಾದ ನ್ಯಾಯಯುತವಾದ ಮಾರ್ಗದಲ್ಲಿ ಸದಾ ನಿಲ್ಲಬೇಕು. ಪ್ರಶ್ನೆ – ದಾನವು ಯಾವುದು ? ಉತ್ತರ – ಪ್ರತಿಫಲವನ್ನು ಬಯಸದೇ ಮಾಡಿದ ದಾನವೇ ನಿಜವಾದ ದಾನವು . ಪ್ರಶ್ನೆ – ನಿಜವಾದ ಮಿತ್ರನು ಯಾರು ? ಉತ್ತರ – ಪಾಪ ಕಾರ್ಯಗಳನ್ನು ಮಾಡದಂತೆ ತಡೆಯುವನು ನಿಜವಾದ ಮಿತ್ರನು. ಪ್ರಶ್ನೆ – ದುಃಖಕರವಾದುದು ಯಾವುದು ? ಉತ್ತರ – ದಾರಿದ್ರ್ಯವು (ಬಡತನವು) ಕಷ್ಟಕರವಾದದ್ದು.. ಪ್ರಶ್ನೆ – ಎಂತಹ ದೇಶದಿಂದ ದೂರ ಇರಬೇಕು ? ಉತ್ತರ – ಕ್ರೂರರಾದ ಪ್ರಜೆಗಳುಳ್ಳ ಮತ್ತು ಲೋಭಿಯಾದ ರಾಜನುಳ್ಳ ದೇಶವನ್ನು ತೊರೆಯಬೇಕು. ಪ್ರಶ್ನೆ – ವಿಶ್ವದಲ್ಲಿ ಸದಾ ದುಃಖದಲ್ಲಿರುವವನು ಯಾರು ? ಉತ್ತರ – ಸಂಪತ್ತಿದ್ದರೂ ದಾನಿಯಾಗಿರದವನೇ ದುಃಖಿ. ಪ್ರಶ್ನೆ – ಹಗಲಿರುಳು (ಸದಾಕಾಲವೂ )ಯಾವುದನ್ನು ಕುರಿತು ಚಿಂತಿಸಬೇಕು ? ಉತ್ತರ – ಹಗಲಿರುಳು ಪರಮಾತ್ಮನ ಚರಣದ ಚಿಂತೆ ಮಾಡಬೇಕೇ ವಿನಃ ಸಂಸಾರವನ್ನಲ್ಲ . ಪ್ರಶ್ನೆ – ಮಾನವರು ಏನನ್ನು ಸಂಪಾದಿಸಬೇಕು ? ಉತ್ತರ – ಮಾನವರು ವಿದ್ಯೆ, ಸಂಪತ್ತು, ಬಲ, ಕೀರ್ತಿ ಮತ್ತು ಪುಣ್ಯಗಳನ್ನು ಸಂಪಾದಿಸಬೇಕು . ಪ್ರಶ್ನೆ – ಎಲ್ಲ ಗುಣಗಳನ್ನು ನಾಶಪಡಿಸುವಂಥಹದು ಯಾವುದು ? ಉತ್ತರ – ಲೋಭವು ಸರ್ವ ಗುಣಗಳನ್ನು ನಾಶ ಪಡಿಸುವಂತಹದು. ಪ್ರಶ್ನೆ – ವೈರಿಯು ಯಾರು ? ಉತ್ತರ – ಕಾಮವೇ ವೈರಿಯು . ಪ್ರಶ್ನೆ – ಸಂರಕ್ಷಿ ಸಲ್ಪಡತಕ್ಕಂಥಹದು ಯಾವುದು ? ಉತ್ತರ – ಕೀರ್ತಿ, ಪತಿವ್ರತೆ ಮತ್ತು ಸ್ವಂತ ಬುದ್ಧಿ (ಸ್ವಂತ ವಿಚಾರ ಶಕ್ತಿ ) ಇವು ಸಂರಕ್ಷಿಸಲು ಅರ್ಹ . ಪ್ರಶ್ನೆ – ಜಗತ್ತಿನ್ನಲ್ಲಿ ಕಲ್ಪವೃಕ್ಷ ಯಾವುದು ? (ಬೇಡಿದ್ದನ್ನು ,ಬಯಸಿದ್ದನ್ನು ಕೊಡುವ ವೃಕ್ಷ) ಉತ್ತರ – ಒಳ್ಳೆಯ ಶಿಷ್ಯನಿಗೆ ಗುರುವು ನೀಡಿದ ವಿದ್ಯೆಯು ಜಗತ್ತಿನಲ್ಲಿ ಕಲ್ಪವೃಕ್ಷವಾಗುತ್ತದೆ. ಪ್ರಶ್ನೆ – ಪಾತಕವು ಯಾವುದು ? ಉತ್ತರ – ಹಿಂಸೆಯೇ (ಕ್ರೌರ್ಯ) ಪಾತಕವು. ಪ್ರಶ್ನೆ – ಒಳ್ಳೆಯವನಿಗೆ ಸಾವಿಗಿಂತಲೂ ಹೆಚ್ಚು ದುಃಖದಾಯಕ ಯಾವುದು ? ಉತ್ತರ – ಅಪಕೀರ್ತಿಯು ಮರಣಕ್ಕಿಂತಲೂ ಹೆಚ್ಚು ದುಃಖದಾಯಕ. ಪ್ರಶ್ನೆ – ಯಾರು ಪ್ರಗತಿ ಯನ್ನು ಹೊಂದುತ್ತಾರೆ ? ಉತ್ತರ – ವಿನಮ್ರ ನಾದವನು (ವಿನಯಶಾಲಿಯು ) ಪ್ರಗತಿಯನ್ನು ಹೊಂದುತ್ತಾನೆ . ಪ್ರಶ್ನೆ – ದೇಹಿಗಳಿಗೆ (ಮನುಷ್ಯರಿಗೆ) ಭಾಗ್ಯವು ಯಾವುದು ? ಉತ್ತರ – ಆರೋಗ್ಯವೇ ಭಾಗ್ಯವು ಪ್ರಶ್ನೆ – ಜಗತ್ತಿನ ಸಂರಕ್ಷಕನ್ಯಾರು ? ಉತ್ತರ – ಸೂರ್ಯ. ಪ್ರಶ್ನೆ – ಎಲ್ಲರ ಬದುಕಿಗೆ ಕಾರಣನು ಯಾರು ? ಉತ್ತರ – ಪರ್ಜನ್ಯನು (ಮಳೆ) ಎಲ್ಲರ ಬದುಕಿಗೆ ಕಾರಣನು . ಪ್ರಶ್ನೆ – ಶೂರನು ಯಾರು ? ಉತ್ತರ – ಭೀತನಾದವನನ್ನು ಕಾಪಾಡುವವನು ಶೂರನು . ಪ್ರಶ್ನೆ – ಮತ್ತೆ ಕಾಪಾಡುವವನು ಯಾರು ? ಉತ್ತರ – ಗುರುವೇ ಕಾಪಾಡುವವನು. ಪ್ರಶ್ನೆ – ಪ್ರತ್ಯಕ್ಷ (ಸಾಕ್ಷಾತ್ ) ದೇವತೆ ಯಾರು ? ಉತ್ತರ – ತಾಯಿಯೇ ಪ್ರತ್ಯಕ್ಷ ದೇವತೆ. ನನ್ನ ಕವನಗಳು =================================== 1) ಸೂರ್ಯನ ಬೆಳಕಿನ ಚಿತ್ತಾರ ಹಕ್ಕಿಗಳ ಚಿಲಿಪಿಲಿ ಇಂಚರ ಶುಭೋದಯದನ ಅಲಂಕಾರ ಅರ್ಪಿಸುವೇ ನಿಮಗಿದೋ ಮುಂಜಾನೆಯ ನಮಸ್ಕಾರ…🙏🏻🙏🏻 2) ನಗುವ ಮನಸ್ಸು ನಿಮ್ಮದು ನಗಿಸುವ ಮನಸ್ಸು ನಂದು 3) ಅಮ್ಮ ಕೊಟ್ಟಿದ್ದು ಜನ್ಮ , ದೇವರು ಕೊಟ್ಟಿದ್ದು ಬುದ್ಧಿ, ಗುರು ಹೇಳಿದ್ದು ವಿದ್ಯೆ, ಆದರೆ ಯಾರಿಗೂ ತಿಳಿಯದೇ ಸಿಕ್ಕಿದ್ದು ಈ ನಿನ್ನ ಪ್ರೀತಿಯ ಸ್ನೇಹ 4) ನಿಮ್ಮ ಹರುಷದ ಬಾಳಿನಲ್ಲಿ ಸಿಹಿ ನೆನಪುಳೆ ತುಂಬಿರಲಿ ನಿಮ್ಮ ಮನಸಿನ ಮುಲೆಯಲ್ಲಿ ನನ್ನದೊಂದು ಪುಟ್ಟ ನೆನಪಿರಲಿ 5) ಸವಿಯಾಗಿ ಬರೆಯಲು ‘ಕವಿಯು’ ನಾನಲ್ಲ ಚಿರವಾಗಿ ಉಳಿಯಲು ಈ ಭೂಮಿ ನನ್ನದಲ್ಲ ಎನೆಂದೂ ಬರೆಯಲಿ ಈ ಮೊಬೈಲ್ ನಲ್ಲಿ ನಿಮ್ಮ ಸ್ನೇಹ ಒಂದೆ ಸಾಕು ನನ್ನ ಈ ಹೃದಯದಲ್ಲಿ